ಏಕೋ ಏನೋ
ಜ್ವಾಲಾಮುಖಿ ಡಾ|| ರಾಜ್ ಕುಮಾರ್, ಬೆಂಗಳೂರು ಲತಾ
ಚಿ. ಉದಯಶಂಕರ್
ರಂಗರಾವ್
ಏಕೋ ಏನೋ ಈ ನನ್ನ ಮನವು
ಉಯ್ಯಾಲೆಯಾಗಿ ತೂಗಿದೆ
ಎಂದೂ ಕಾಣೆ ನೂರೆಂಟು ಬಯಕೆ
ಹೊಸ ರಾಗವನ್ನು ಹಾಡಿದೆ|| ಪ ||
ಬಿಸಿಲಾದರೇನು ಮಳೆಯಾದರೇನು
ಇಂದೇಕೊ ನಾಕಾಣೆ ಹಾಯಾಗಿದೆ
ಹೂವಾದರೇನು ಮುಳ್ಳಾದರೇನು
ಇಂದೇಕೊ ನನಗೆಲ್ಲ ಸೋಗಸಾಗಿದೆ
ಎದೆಯಲ್ಲಿ ಸಂತೋಷ ಕಡಲಾಗಿದೆ
ಮನದಲ್ಲಿ ಹೊಸ ಆಸೆ ಕುಣಿದಾಡಿದೆ|| 1 ||
ಬದುಕೆಲ್ಲ ಹೀಗೆ ಉಲ್ಲಾಸದಿಂದ
ಒಂದಾಗಿ ಇರುವಾಸೆ ನನಗಾಗಿದೆ
ಅನುರಾಗ ತಂದ ಆನಂದದಿಂದ
ಈ ಬಾಳ ಸಂಗೀತ ಹಿತವಾಗಿದೆ
ಮಾತಾಡೊ ಮಾತೆಲ್ಲ ಸೊಗಸಾಗಿದೆ
ಇಂದೇಕೊ ನನಗೆಲ್ಲ ಹೊಸದಾಗಿದೆ|| 2 ||
ಜ್ವಾಲಾಮುಖಿ
ಚಿತ್ರ ನೋಡಿ